DONOR LOGIN

NEWS

ಭರವಸೆಯ ಬೆಳಕು ಗುರು ಬೆಳದಿಂಗಳು : ದಯಾನಂದ ಕರ್ಕೇರ ಉಗ್ಗೆಲ್‌ಬೆಟ್ಟು.

About Gurubeladingalu

ನೇರ ನಡೆನುಡಿಯ ನಿಷ್ಕಲ್ಮಶ ನಾಯಕ ಗೌರವಾನ್ವಿತ ಶ್ರೀ ಬಿ ಜನಾರ್ದನ ಪೂಜಾರಿಯವರ  ಮಾರ್ಗದರ್ಶನವನ್ನು ಪಡೆದು ಗುರುಬೆಳದಿಂಗಳು ಅಸ್ತಿತ್ವಗೊಂಡಿದೆ.ಅಗ್ರಗಣ್ಯ ನಾಯಕರಾಗಿದ್ದ ದಿ.ಜಯ ಸಿ ಸುವರ್ಣರ ಅನೇಕ ಆಶಯಗಳೂ ಇಲ್ಲಿ ಅಂತರ್ಗತಗೊಂಡಿದೆ.
ಮಹತ್ವಾಕಾಂಕ್ಷೆಯ ಗುರುಬೆಳದಿಂಗಳನ್ನು ಹಲವು ಸಮಯದಿಂದ ಚಿಂತನ ಮಂಥನಗೊಳಿಸಿ ಅದಕ್ಕೆ ಯೋಗ್ಯ ನಾಯಕತ್ವದ ಶಕ್ತಿಯಾದವರು,ನಂಬಿಕೆ ವಿಶ್ವಾಸದ ಉಪಮೆಯಾಗಬಲ್ಲ ಶ್ರೀ ಕ್ಷೇತ್ರ ಕುದ್ರೋಳಿಯ ಕೋಶಾಧಿಕಾರಿ,ಯುವವಾಹಿನಿ  ಸಲಹೆಗಾರರು,ಸಾಮಾಜಿಕ ನ್ಯಾಯವನ್ನೆ ಬಯಸುವ ನ್ಯಾಯವಾದಿ, ಪರಿಶುದ್ಧ ವ್ಯಕ್ತಿತ್ವದೊಂದಿಗೆ ಚಿರಪರಿಚಿತಗೊಂಡಿರುವ ಪ್ರೀತಿಯ ಪದ್ಮರಾಜ್ ಆರ್,ರವರು.
ಉಪಕಾರವನ್ನೆ ಉಸಿರಾಡುವ ಈ ಸತ್ಯನಿಷ್ಠೆಯ ಸಿಪಾಯಿಯ ಮುಖ್ಯ ಪರಿಕಲ್ಪನೆಯಲ್ಲಿ ಗುರುಬೆಳದಿಂಗಳು ಪ್ರಕಾಶಿಸುತ್ತಿದೆ.ದೋಸ್ತಿಗೆ ಆಸ್ತಿ..ಪ್ರೀತಿಯೆ ಜಾಸ್ತಿಯಿರುವ ಸನ್ಮಾನ್ಯ ಪದ್ಮರಾಜರಿಗೆ ಜನಸಾಮಾನ್ಯರ ಕುರಿತು ಅತೀವ ಕಾಳಜಿಯಿದೆ. ಸುಖದುಃಖ,ನೋವು ನಲಿವಿಗೆ ಸ್ಪಂದಿಸುವ ಉದಾರತೆಯಿದೆ.
ಯಾವುದೇ ಒಂದು ವಿಚಾರವನ್ನು ಕೂಲಂಕುಷವಾಗಿ ನಿರ್ಧರಿಸುವ ದೃಢ ನಿಲುವಿದೆ.ಹಿರಿಕಿರಿಯರ ಉತ್ತಮ ಅಭಿಪ್ರಾಯಗಳನ್ನು ಆಲಿಸುವ,ಆಯೋಜಿಸುವ ಬದ್ದತೆಯಿದೆ.ಅಳೆದು ತೂಗಿದಷ್ಟೂ ಸಕಾರಾತ್ಮಕ ಸಂಗತಿಗಳಲ್ಲೆ ಮಿಗುತೆಯಿರುವ ಶ್ರೀಯುತರು ಹಾಗೂ ಸಮಾನ ಮನಸ್ಕ ಸನ್ಮಿತ್ರರು ಕೂಡಿಕೊಂಡು ಪ್ರಸ್ತುತ ದಿನಮಾನದಲ್ಲಿ ಹೆಚ್ಚು ಅಗತ್ಯವಿರುವ ಸೇವಾ ಆಲೋಚನೆಗಳನ್ನು ಹೊಂದಿಸಿ ಗುರುಬೆಳದಿಂಗಳು ಸಜ್ಜುಗೊಂಡಿದೆ.ಇಲ್ಲಿ ಏನೆಲ್ಲ ಮಾಡಬಹುದೆನ್ನುವ ಸ್ಪಷ್ಟ ರೂಪುರೇಷೆಯಿದೆ.ಸಮಾನತೆ,ಸಹೋದರತೆ,ಸೌಹಾರ್ದತೆ,ಸಮನ್ವಯತೆಗೆ ಆದ್ಯತೆ ನೀಡಿ
ಭವಿಷ್ಯದ ಬಗ್ಗೆ ಬಹಳಷ್ಟು ಯೋಚಿಸಿ ಅಗತ್ಯ ಕಾರ್ಯಗಳನ್ನು ಯೋಜಿಸಿದೆ.ಹಣಕಾಸು ಸೇರಿದಂತೆ ಪ್ರತಿಯೊಂದು ಚಟಿವಟಿಕೆಯೂ ಸೂಕ್ತ ನಿಯಮಗಳನುಸಾರವಾಗಿ ನಿಖರಗೊಂಡಿದೆ. ಅತಿ ಸೂಕ್ಷ್ಮ ಅಂಶಗಳ ಕುರಿತಾಗಿಯೂ ಸುದ್ದಿ ಸದ್ದು ಹುದ್ದೆಗಳಿಲ್ಲದೆ ಜವಬ್ದಾರಿಯು ಗಮನಾರ್ಹವಾಗಿ ನಿಭಾಯಿಸಲ್ಪಡುತ್ತಿರುವುದು ತಂಡ ಸ್ಪೂರ್ತಿಗೆ ಸಾಕ್ಷಿ.
ನಾವು ಮಾಡುವ ಕಾರ್ಯಗಳು ನಮ್ಮಂತೆ ಇತರರಿಗೂ ಹಿತವಾಗಿರಬೇಕು ಎನ್ನುವ
ವಿಶ್ವವಂದ್ಯ ಶ್ರೀ ನಾರಾಯಣ ಗುರುಗಳ ತತ್ವದಂತೆ ಸಮಾಜದ ಅಶಕ್ತರೆಲ್ಲರ ಪಾಲಿಗೆ ಗುರು ಬೆಳದಿಂಗಳು ಬೆಳಕಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಪ್ರಚಲಿತ ದಿನದ ಕೋರೋನಾ ಸಂಕಷ್ಟವನ್ನು ಅರಿತು ತೀರಾ ಅನಾನುಕೂಲ ಪರಿಸ್ಥಿತಿಯಲ್ಲಿರುವವರಿಗೆ ಉದಾರಮನದಿಂದ ಸ್ಪಂದಿಸುತ್ತಿದೆ.ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ವ್ಯವಸ್ಥಿತ ತಂಡದ ಮುಖೇನ ತೀರಾ ಅಶಕ್ತರನ್ನು  ಪರಿಗಣಿಸಿ ಅವರಿಗೆ ಔಷಧ,ದಿನಬಳಕೆಯ ವಸ್ತು,ಸಹಾಯಧನ ಇನ್ನಿತರ ಅಗತ್ಯತೆಗಳೊಂದಿಗೆ ಜೊತೆಯಾಗಿ ಈಗಾಗಲೇ ಸ್ಪಷ್ಟ ಲೆಕ್ಕಾಚಾರದ ಲಕ್ಷಾಂತರ ಮೊತ್ತವನ್ನು ವ್ಯಯಿಸಿ ಅಮೂಲ್ಯ ಸೇವೆಯನ್ನು ಸಲ್ಲಿಸುತ್ತಿದೆ.ಕಳೆದ ವರ್ಷದ ಲಾಕ್‌ಡೌನ್ ಸಂದರ್ಭದಲ್ಲಿ ಕುದ್ರೋಳಿ ದೇವಸ್ಥಾನದಲ್ಲಿ ಸ್ವಯಂಸೇವಾ ಸ್ಪೂರ್ತಿಯ ಶಿಸ್ತುಬದ್ದ ಸೇವಾದಳದ ಸಹಭಾಗಿತ್ವದಲ್ಲಿ ಸಾವಿರಾರು ಮಂದಿಗೆ ಅನ್ನದಾನ,ಆಹಾರವಶ್ಯಕ ವಸ್ತು ದಾನ ಮಾಡಲಾಗಿತ್ತು.ಈ ಮಾದರಿಯಲ್ಲೆ ಮುಂದುವರಿದು ಇಂದಿನ ಅಸಹಾಯಕರ ಪಾಲಿಗೆ ಅಪತ್ಬಾಂಧವ ರೂಪದಲ್ಲಿ ಈ ಬಳಗ ಜೊತೆಯಾಗುತ್ತಿದೆ.ಮತ್ತೊಂದು ಪ್ರಾಮುಖ್ಯ ವಿಚಾರವಾಗಿ ಸಮಸ್ತ ಗರೋಡಿಗಳ ಪೂಪೂಜನೆಯವರಿಗೆ ದಿನಬಳಕೆ ವಸ್ತುಗಳ ಕಿಟ್ ವಿತರಣೆಗೆ ನಿರ್ಧರಿಸಿದ್ದಾರೆ.ಇವತ್ತು ಸರ್ಕಾರ ಮಾಡಬೇಕಾಗಿದ್ದ ಈ ಸಹಾಯ ಸತ್ಕಾರ್ಯವನ್ನು ಗುರು ಬೆಳದಿಂಗಳು ಮಾಡುತ್ತಿರುವ ಕುರಿತು ಗರೋಡಿ ಪೂಪೂಜನೆಯವರು,ಗರೋಡಿ ಭಕ್ತರು‌ ಉಜ್ವಲ ಸೇವಾ ಸಂಸ್ಥೆಯಾಗಿ ಗುರು ಬೆಳದಿಂಗಳನ್ನು ಮುಕ್ತಕಂಠದಿಂದ ಶ್ಲಾಘಿಸಿ ಹಾರೈಸುತ್ತಿದ್ದಾರೆ.
ಸರ್ವರಿಗೂ ಸ್ಪಂದಿಸಬೇಕೆನ್ನುವ ಅಂತಃಕರಣದ ಅಣ್ಣ ಪದ್ಮರಾಜ್‌ರವರೊಂದಿಗೆ ದೊಡ್ಡ ಸಂಖ್ಯೆಯಲ್ಲಿ ಕ್ರಿಯಾಶೀಲ ಯುವಕರ ಸದೃಢ ತಂಡವಿದೆ.ಇವರೆಲ್ಲ ಸಾಮಾಜಿಕ,ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಸಂಪನ್ನರು,ವಿವಿಧ ಆಯಾಮಗಳಲ್ಲಿ ಸಾಧನಾ ಶೀಲರು, ಬಹುಮುಖಿ ಪ್ರತಿಭಾವಂತರು. ಗುರುಬೆಳದಿಂಗಳಿನ ಸದುದ್ದೇಶ ಸಾರ್ಥಕಗೊಳಿಸುವಲ್ಲಿ ಯಾವುದೇ ಪ್ರತಿಷ್ಠೆ,ಪ್ರಚಾರ,ಪ್ರತಿಫಲ ಬಯಸದೆ ಕೇವಲ ಶ್ರೀ ಕ್ಷೇತ್ರ ಕುದ್ರೋಳಿಯ ಕೃಪೆಯಷ್ಟೆ ಸಾಕು ಎನ್ನುವ ಈ ಯುವ ಸಮೂಹ ನಿಜಕ್ಕೂ ಹೆಮ್ಮೆ.
ಧ್ಯೆರ್ಯದಿಂದ ನಿಶ್ಚಯಿಸಿದ ಸತ್ಯಕ್ಕೆ ಜಯ ಖಚಿತ ಎನ್ನುವುದರ ಸಾಬೀತಾಗಿ ಸಹೃದಯವಂತ ಅನೇಕರು ಗುರು ಬೆಳದಿಂಗಳನ್ನು ತನು ಮನ ಧನದೊಂದಿಗೆ ಪ್ರೋತ್ಸಾಹಿಸುತ್ತಿದ್ದಾರೆ. ಒಂದು ಉತ್ತಮ ಆಲೋಚನೆಯ ಯಶಸ್ಸು ಅವಲಂಬಿಸಿರುವುದು ಪ್ರತೀ ಹಂತದ ದಕ್ಷತೆಯನ್ನು. ಅದಕ್ಕೆ ಹೆಚ್ಚು ಗಮನ ನೀಡಿರುವ ಕಾರಣದಿಂದಾಗಿಯೇ ಹೃದಯವಂತಿಕೆಯ ಹಣವಂತರು ಹೃನ್ಮನದಿಂದ ಕೈಜೋಡಿಸಿದ್ದಾರೆ.ಲೋಕಶಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರು ಸ್ಥಾಪಿತ 
ಕುದ್ರೋಳಿ ಗೋಕರ್ಣನಾಥೇಶ್ವರ ಸನ್ನಿಧಿ ಧಾರ್ಮಿಕವಾಗಿ ಮಾತ್ರವಲ್ಲದೆ ಸಮಾಜಮುಖಿ ಕಳಕಳಿ ಹಾಗೂ ಪರೋಪಕಾರದ ವಿವಿಧ ಆಯಾಮಗಳಿಗೆ ಸಾಕ್ಷಿಯಾಗಿರುವುದು ಸರ್ವವಿದಿತ.ಇದನ್ನು ಮತ್ತಷ್ಟು ಪೂರಕವಾಗಿಸುವ ಪುಣ್ಯ 
ಪ್ರಯತ್ನದೊಡನೆ ಪ್ರಗತಿದಾಯಕ ಪಥದಲ್ಲಿರುವ ಗುರು ಬೆಳದಿಂಗಳು ಹೊಸ ಭರವಸೆಯ ಬೆಳಕಾಗಿದೆ.ಇದು ಸಂಕಷ್ಟದ ಕತ್ತಲೆಯನ್ನು ಕಳೆದು ಸಮೃದ್ಧಿಯನ್ನು  ಪ್ರಕಾಶಿಸಲಿ.ಸರ್ವರ ಅಭ್ಯುದಯದ ಹಂಬಲವನ್ನು ಸಂಪ್ರೀತಿಯಿಂದ ಬೆಂಬಲಿಸೋಣ. ಸಹಕಾರಿ ಮನದ ಬೆಳಕಿನ ಚುಕ್ಕಿ  ಸದಸ್ಯಮಿತ್ರರು ಪೂರ್ಣಚಂದ್ರ ಪದ್ಮರಾಜರ ಜೊತೆಗೆ ಸೇವಾ ಅಂಗಳದಲ್ಲಿ ಶೋಭಿಸಲಿ.ಪರಿಪೂರ್ಣತೆಯ ಪೂರ್ಣಿಮೆಯಾಗಿ ಈ ಬೆಳಕು ಜಗಬೆಳಗಲಿ.
ಸರ್ವೇ ಜನ ಸುಖಿನೋ ಭವಂತು

ಮಾನವೀಯ ಮೌಲ್ಯಗೆ ಹೊಸ ಭಾಷ್ಯ ಬರೆದ ಗುರು ಬೆಳದಿಂಗಳು ಸೇವಾ ಸಂಸ್ಥೆ : ಪಾಂಡು ಕೋಟ್ಯಾನ್ ಕೆಳಾರ್ಕಳಬೆಟ್ಟು

About Gurubeladingalu

ಕೋರೊನಾ ಸಂಕಷ್ಟದ ಕಾಲಘಟ್ಟದಲ್ಲಿ  ಸರಕಾರಿ ವ್ಯವಸ್ಥೆಗಳು ಜನರ ಬವಣೆಯನ್ನು ನೀಗಿಸಲು ಹಲವಾರು ಯೋಜನೆಗಳನ್ನು  ರೂಪಿಸಿದರೂ ಆರ್ಹ ಫಲಾನುಭವಿಗಳನ್ನು ಪೂರ್ಣ ಪ್ರಮಾಣದಲ್ಲಿ  ತಲುಪುವುದು ಅಸಾಧ್ಯವಾಗುತ್ತಿರುವುದು ಕಾಣಬಹುದಾಗಿದೆ.ಸಾಮಾಜಿಕವಾದ ಮಹತ್ತರವಾದ ಹೊಣೆಗಾರಿಕೆಯಿಂದ ಗುರುತಿಸಿಕೊಂಡ ಗುರುಬೆಳದಿಂಗಳು ಸಂಸ್ಥೆ ಸಾಮಾಜಿಕ ಹಾಗು ಆರ್ಥಿಕ ಮತ್ತು ಆರೋಗ್ಯ ಸೇವಾ ವಲಯದಲ್ಲಿ ಸಹಾಯಹಸ್ತವನ್ನು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ವ್ಯವಸ್ಥಿತವಾಗಿ ನೀಡುತಿದ್ದು ಈ ಸಂಕಷ್ಟ ಕಾಲಘಟ್ಟದಲ್ಲಿ ಗರೋಡಿಯಲ್ಲಿ ಪೂ ಪೂಜನೆಯನ್ನು ನಿರ್ವಹಿಸಿಕೊಂಡು ಬರುತ್ತಿರುವ ಪೂಜಾರಿಗಳಿಗೆ ದೈನಂದಿನ ಉಪಯೋಗಕ್ಕೆ ಪೂರಕವಾಗಿ ಆಹಾರ ಸಾಮಾಗ್ರಿಗಳನ್ನು ಒದಗಿಸುವ ಕುರಿತು ಸರಕಾರಿ ಆಡಳಿತಕ್ಕೆ ಸೇವಾ ಸಂಘಗಳು ಮನವಿಯನ್ನು ಸಲ್ಲಿಸಿದ್ದರೂ ಕೂಡಾ ಕನಿಷ್ಟ ಸ್ಪಂದನೆಯು ಸಿಗದೇ ಇರುವ ಸಮಯದಲ್ಲಿ ಗುರು ಬೆಳದಿಂಗಳ ಸಂಸ್ಥೆಯ ಉಪಾಧ್ಯಾಕ್ಷರಾದ ಶ್ರೀ ರಘುನಾಥ ಮಾಬಿಯಾನ್ ಇವರ ಸಮಯೋಚಿತ ನಿಲುವುಗಳನ್ನು ಶ್ರೀ ಪದ್ಮರಾಜ್ ಇವರ ಗಮನಕ್ಕೆ ತಂದಿದ್ದು, ಕ್ಷೀಪ್ರವಾಗಿ ಪ್ರತಿಕ್ರಿಯಿಸಿದಲ್ಲದೇ ಸಂಸ್ಥೆಯ ವತಿಯಿಂದಲೆ ಸಹಾಯ ಹಸ್ತವನ್ನು ನೀಡುವುದನ್ನು ಪ್ರಕಟಿಸಿ ಕಾರ್ಯತತ್ಪರವಾಗಿ ತಮ್ಮ ಸಂಗಡಿಗರನ್ನು ಒಡಗೂಡಿಸಿ ಗರೋಡಿ ಗೈಸ್ ಸಂಸ್ಥೆಯು ನೀಡಿದ ಆರ್ಹ ಪಲಾನುಭವಿಗಳ ಪಟ್ಟಿಯನ್ನು ಪರಿಗಣಿಸಿ  ಕೇವಲ 2 ದಿನಗಳಲ್ಲಿ ಸರಿ ಸುಮಾರು 72 ಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ತಯಾರಿಸಿ ದಿನಾಂಕ 30/05/2021 ರಂದು ಉಡುಪಿಯ ಕಿನ್ನಿಮೂಲ್ಕಿ ಬೆಮ್ಮೆರ್ ಬೈದರ್ಲೆ ಗರೋಡಿಯಲ್ಲಿ ಹಿರಿಯರಾದ ಬನ್ನಂಜೆ ಬಾಬು ಅಮೀನ್, ಉಡುಪಿ ವೃತ್ತ ನೀರಿಕ್ಷಕರಾದ ಶ್ರೀ ಮಂಜುನಾಥ ,ಬಿಲ್ಲವ ಯುವ ವೇದಿಕೆಯ  ಪ್ರವೀಣ ಎಂ ಪೂಜಾರಿ ಯುವವಾಹಿನಿಯ ಪ್ರಮುಖರು ಹಾಗೂ ಗರೋಡಿ ಗೈಸ್ ನ ಸದಸ್ಯರುಗಳ  ಸಮ್ಮುಖದಲ್ಲಿ ಉಡುಪಿ ಜಿಲ್ಲೆಯ ಗರೋಡಿಗಳ ಪೂ ಪೂಜನೆಯ ಅರ್ಚಕರಿಗೆ ಸಾಂಕೇತಿಕವಾಗಿ ಅಹಾರ ಸಾಮಾಗ್ರಿಗಳ ಕಿಟ್ ಗಳನ್ನು ಹಸ್ತಾಂತರಿಸಲಾಯಿತು. ಗುರು ಬೆಳಂದಿಗಳ ಸೇವಾ ಸಂಸ್ಥೆಯ ವೈಶಿಷ್ಟ್ಯ ಪೂರ್ಣ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಆರ್ಥಿಕವಾಗಿ ಸಬಲರುಳ್ಳವರು ದುರ್ಬಲ ವ್ಯಕ್ತಿಗಳಿಗೆ ಸಾಹಾಯ ಹಸ್ತ ನೀಡುವುದಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ತರಬೇತು ನೀಡಲು ವೃತ್ತ ನಿರೀಕ್ಷಕರಾದ ಶ್ರೀ ಮಂಜುನಾಥರವರು  ಕರೆ ನೀಡಿದರು. ಶ್ರೀ ಪದ್ಮರಾಜ್ ರವರು ಮಾತನಾಡುತ್ತಾ ಗುರು ಬೆಳಂದಿಗಳು ಸೇವಾ ಸಂಸ್ಥೆಯ ಮುಂದಿನ ಕಾರ್ಯ ಯೋಜನೆಯ ಬಗ್ಗೆ ವಿವರಿಸುತ್ತಾ ಸಂಸ್ಥೆಯು  ಸದಾಕಾಲ ದುರ್ಬಲರ ಶೋಷಿತರ ಪರವಾದ ಧ್ವನಿಯಾಗಿ  ಇರುತ್ತದೆ ಎಂಬ ಭರವಸೆಯನ್ನು ನೀಡಿದರು. ಬನ್ನಂಜೆ ಬಾಬು ಅಮೀನ್ ರವರು ಮಾತನಾಡುತ್ತಾ ತುಳುನಾಡಿನ ಮಣ್ಣಿನ ಶಕ್ತಿಗಳ ಅಂತಸತ್ವದ  ಪರಿಚಯವನ್ನು ಮಾಡುತ್ತಾ ಕೊರೊನಾ ಕಾಲಘಟ್ಟದಲ್ಲಿ ಸಂಸ್ಥೆಯ ಸೇವಾಕಾರ್ಯವು ಬೇರೆ ಸಂಸ್ಥೆಗಳಿಗೆ ಮಾದರಿಯಾಗಲಿ  ಎಂದು ಹಾರೈಸಿದರು. ಶ್ರೀ ಭಾಸ್ಕರ ಸುವರ್ಣ ಇವರು ಕಾರ್ಯಕ್ರಮವನ್ನು ನಿರ್ವಹಿಸಿ ಸ್ವಾಗತಿಸಿದರು. ಯುವವಾಹಿನಿ ಮಾಜಿ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಧನ್ಯವಾದ ಸಮರ್ಪಿಸಿದ ಕಾರ್ಯಕ್ರಮದಲ್ಲಿ ಯುವವಾಹಿನಿಯ ಮಾಜಿ ಅಧ್ಯಕ್ಷರಾದ ಶ್ರೀ ರವಿರಾಜ್ ಕುಮಾರ್ , ಮಂಜೇಶ್ ಕುಮಾರ್ , ಯುವವಾಹಿನಿ ಗರೋಡಿ ಗೈಸ್  ಗುರುಬೆಳದಿಂಗಳು ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು. ಸಾಮಾಜಿಕ ಸೇವಾ ಸಂಸ್ಥೆಯಲ್ಲಿ ಆತ್ಮ ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀ ಗುರು ಬೆಳದಿಂಗಳು ಸಂಸ್ಥೆಯ ಮಾನವೀಯ ಮೌಲ್ಯದ ಕಾರ್ಯಗಳು ಹೊಸ ಭಾಷ್ಯವನ್ನು ಬರೆದಂತಾಗಿದೆ.ಕಳೆದ ಕೊರೋನಾ ಲಾಕ್ ಡೌನ್ ಅವಧಿಯಲ್ಲಿ 350 ಕಿಂಟ್ವಾಲ್ ಅಕ್ಕಿ ಹಾಗೂ ಪ್ರತಿ ದಿನ 1200 ಜನರಿಗೆ ಊಟದ ವ್ಯವಸ್ಥೆಯನ್ನು  ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಿರ್ವಹಿಸಲ್ಪಟ್ಟಿದ್ದು ಜನಮನ್ನಣೆಗೆ ಪಾತ್ರವಾಗಿರುತ್ತದೆ. ಗುರು ಬೆಳದಿಂಗಳು ಸಂಸ್ಥೆಯು ಕೇವಲ ಜಿಲ್ಲೆಗೆ ಸೀಮಿತವಾಗದೇ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿ ಮನುಕುಲದ ಅಭಿವೃದ್ದಿಗೆ ನಾರಾಯಣಗುರುಗಳು ನೀಡಿದ ಕೊಡುಗೆಯನ್ನು ಮುಂದುವರೆಸುವ ಶಕ್ತಿಯಾಗಿ ಮೂಡಿಬರಲೆಂದು ಹಾರೈಸುತ್ತೇವ

 

ಗರೋಡಿಗಳ ಪೂ ಪೂಜನಾ ಸೇವಕರಿಗೆ ಸಂಜೀವಿನಿಯಾದ ಗುರುಬೆಳದಿಂಗಳು : ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಶ್ಲಾಘನೆ

About Gurubeladingalu

ಉಡುಪಿಯ ಕಿನ್ನಿಮೂಲ್ಕಿ ಬೆಮ್ಮೆರ್ ಬೈದರ್ಲೆ ಗರೋಡಿಯಲ್ಲಿ ಕಿಟ್ ಹಸ್ತಾಂತರ ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಮಾತನಾಡಿ, ಗುರುಬೆಳದಿಂಗಳು ಸೇವಾ ಸಂಸ್ಥೆ ಬ್ರಹ್ಮ ಬೈದರ್ಕಳ ಗರೋಡಿಯ ಪೂ ಪೂಜನಾ ಸೇವಕರಿಗೆ ಸಂಜೀವಿನಿಯಾಗಿದೆ ಎಂದು ಶ್ಲಾಘಿಸಿದರು.

ತುಳುನಾಡಿನ ಮಣ್ಣಿನ ಶಕ್ತಿಗಳ ಅಂತಃಸತ್ವದ  ಪರಿಚಯ ಮಾಡುತ್ತ ಕರೊನಾ ಕಾಲಘಟ್ಟದಲ್ಲಿ ಸಂಸ್ಥೆಯ ಸೇವಾ ಕಾರ್ಯ ಬೇರೆ ಸಂಸ್ಥೆಗಳಿಗೆ ಮಾದರಿಯಾಗಲಿ ಎಂದು ಹಾರೈಸಿದರು.

ಉಡುಪಿ ವೃತ್ತನೀರಿಕ್ಷಕ ಮಂಜುನಾಥ ಮಾತನಾಡಿ, ಇನ್ನಷ್ಟು ಅಶಕ್ತರ ಸೇವೆ ಮಾಡುವ ಮೂಲಕ ಗುರುಬೆಳದಿಂಗಳು ನೊಂದವರ ಪಾಲಿಗೆ ಬೆಳಕಾಗಲಿ ಎಂದು ಹಾರೈಸಿದರು.

ಬಿಲ್ಲವ ಯುವ ವೇದಿಕೆಯ ಪ್ರವೀಣ್ ಎಂ. ಪೂಜಾರಿ, ಯುವವಾಹಿನಿಯ ಮಾಜಿ ಅಧ್ಯಕ್ಷರಾದ ರವಿರಾಜ್ ಕುಮಾರ್ , ಮಂಜೇಶ್ ಕುಮಾರ್, ಗುರು ಬೆಳದಿಂಗಳು ಸಂಸ್ಥೆಯ ಅಧ್ಯಕ್ಷ, ವಕೀಲ ಪದ್ಮರಾಜ್ ಆರ್., ಉಪಾಧ್ಯಕ್ಷ ರಘುನಾಥ ಮಾಬಿಯಾನ್‌, ರಾಜೇಶ್ ಸುವರ್ಣ, ಯುವವಾಹಿನಿ, ಗರೋಡಿ ಗೈಸ್ , ಗುರುಬೆಳದಿಂಗಳು ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.  ಕಿನ್ನಿಮುಲ್ಕಿ ಗರೋಡಿಯ ಪೂಜಾರಿ ಭಾಸ್ಕರ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ವಂದಿಸಿದರು.

1.98 ಲಕ್ಷ ರೂಗಳ ಆಹಾರ ಸಾಮಗ್ರಿ ವಿತರಣೆ
ಉಡುಪಿ ಜಿಲ್ಲೆಯ 72 ಕುಟುಂಬಗಳಿಗೆ ತಲಾ ರೂ 2750/-  ಮೌಲ್ಯದ ಆಹಾರ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು. ಉಡುಪಿ ಜಿಲ್ಲೆಯ ಪೂ ಪೂಜನಾ ಪೂಜಾರಿಗಳಿಗೆ ಗರೋಡಿ ಗೈಸ್ ತಂಡದ ಸದಸ್ಯರ ನೇತೃತ್ವದಲ್ಲಿ ಈಗಾಗಲೆ ವಿತರಣೆ ಕಾರ್ಯ ಆರಂಭವಾಗಿದೆ.
 

ನೊಂದ ಮುಖದಲ್ಲಿ ನಗುವಿನ ಬೆಳಕು ಮೂಡಿಸಿದ ಗುರುಬೆಳದಿಂಗಳು

About Gurubeladingalu

ಕೊಟ್ಟ ದಾನ ಕಡೆ ತನಕ ಕಾಯಬೇಕು...
ಪಡೆದ ದಾನ ಇರೋ ತನಕ ನೆನೆಯಬೇಕು..
ಹೌದು ಗುರುಬೆಳದಿಂಗಳು (ರಿ) ಕುದ್ರೋಳಿ ಸೇವಾ ಯೋಜನೆಯ ಮೂಲ ಉದ್ದೇಶವೇ ಕೇಂದ್ರದ ಮಾಜಿ ಸಚಿವ ಶ್ರೀ ಬಿ.ಜನಾರ್ದನ ಪೂಜಾರಿಯವರ ಮನದಾಳದಂತೆ ನಾವು ಕೊಡುವ ಸೇವೆ ಇತರರಿಗಿಂತ ಭಿನ್ನ ಮತ್ತು ಕೊಟ್ಟ ದಾನ ಸರಿಯಾಗಿ ಉಪಯೋಗವಾಗಬೇಕು. ಸಹಾಯ ಯಾಚಿಸುವವರ ಮೊಗದಲ್ಲಿ ಮಂದಹಾಸದ ಬೆಳಕು ಮೂಡಬೇಕು ಎನ್ನುವುದು.
ಸಹೃದಯರ ಆರ್ಥಿಕ ಕ್ರೋಢೀಕರಣದಿಂದ ಬೆಳೆದ ನಿಮ್ಮ ಗುರುಬೆಳದಿಂಗಳು(ರಿ) ಕುದ್ರೋಳಿ ತನ್ನ ಸೇವಾ ಯೋಜನೆ ಮುಂದುವರಿದ ಭಾಗವಾಗಿ ಆರ್ಥಿಕವಾಗಿ ಹಿಂದುಳಿತ ಕುಟುಂಬದ ಮಗುವಿಗೆ ಅತ್ಯಾಧುನಿಕ ಸೌಲಭ್ಯದಿಂದ ಕೂಡಿದ ಗುಣಮಟ್ಟದ ವೀಲ್‌ಚೇರ್ ನೀಡಲಾಯಿತು.
ಕುದ್ರೋಳಿ ಗೋಕರ್ಣನಾಥ ಕಾಲೇಜು ಬಳಿಯ ನಿವಾಸಿಯೊಬ್ಬರು ನಮ್ಮ ಸಂಸ್ಥೆಯ ಜತೆ ಬಂದು ತನ್ನ ಮಗಳು ಹುಟ್ಟು ಅಂಗವೈಕಲ್ಯದಿಂದ ನಡೆದಾಡದ ಸ್ಥಿತಿಯಲ್ಲಿದ್ದು,. ಆರ್ಥಿಕ ಸಮಸ್ಯೆಯಿಂದ ವೀಲ್‌ಚೇರ್ ತೆಗೆದುಕೊಳ್ಳಲು ಕಷ್ಟಪಡುತ್ತಿದ್ದೇವೆ. ಆದರಿಂದ ಸಾಮಾನ್ಯ ಒಂದು ವೀಲ್‌ಚೇರ್ ಆದರೂ ನೀಡಿ ಸಹಕರಿಸಿ ಎಂದು ಮನವಿ ಮಾಡಿದ್ದರು. ಆದರಂತೆ ಮಗುವಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡ ಗುರುಬೆಳದಿಂಗಳು ಆಯ್ಕೆ ಸಮಿತಿಯು ತಜ್ಞರ ಜತೆ ಚರ್ಚಿಸಿ ಅವರ ಸಲಹೆಯಂತೆ  ಅತ್ಯಾಧುನಿಕ ಸೌಲಭ್ಯದ ( PAEDIATRIC WHEEL CHAIR) ವೀಲ್‌ಚೇರ್ ನೀಡಲು ಟೀಮ್ ಗುರುಬೆಳದಿಂಗಳು ನಿರ್ಧರಿಸಿತು.

 ಸುಮಾರು 25 ಸಾವಿರ ರೂ. ವೆಚ್ಚದ ವೀಲ್‌ಚೇರ್ ಅನ್ನು ಮೇ 18ರಂದು ಗುರುಬೆಳದಿಂಗಳು ಸೇವಾಯೋಜನೆಯ ಆರೋಗ್ಯ ನಿಧಿಯಿಂದ ಬೆಳಪು ಸತೀಶ್ ಪೂಜಾರಿ ಮಾತೃಶ್ರೀ ದಿ.ಪದ್ಮ ಬೆಳಪು‌ ಸ್ಮರಣಾರ್ಥ ಹಸ್ತಾಂತರಿಸಲಾಯಿತು. 

ನಮ್ಮ ಸಂಸ್ಥೆಯೊಂದಿಗೆ ನೀವೂ ಕೈಜೋಡಿಸಬಹುದು.
 

For more details : http://www.gurubeladingalu.org

Contact : 9901246123
To contribute - 
NAME : GURU BELADINGALU
BANK : CANARA BANK
ACCOUNT NO : 110000894880
IFSC CODE : CNRB0010241
BRANCH : LALBAGH TOWER, BALLALBAGH

UPI :  301617062894880@cnrb

ಭರವಸೆಯ ಬೆಳಕಾಯ್ತು ಗುರುಬೆಳದಿಂಗಳು

About Gurubeladingalu

ಇತ್ತೀಚೆಗಷ್ಟೆ ಆರಂಭವಾದ ಗುರುಬೆಳದಿಂಗಳು ಕೋವಿಡ್ ಆರೋಗ್ಯ ವಿಷಮ ಸ್ಥಿತಿಯಲ್ಲಿ ಸಂಕಷ್ಟದಲ್ಲಿರುವ ಸೇವೆಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾದ್ಯಂತ ಸಹಾಯವಾಣಿ ಆರಂಭಿಸಿದ್ದು, ಕರೊನಾ ಬಾಧಿಸಿ ಸಂಕಷ್ಟದಲ್ಲಿರುವವರಿಗೆ ವೈದ್ಯರ ಸಲಹೆ, ಆಂಬುಲೆನ್ಸ್ ಸೇವೆ, ಕ್ಷಣ ಕ್ಷಣದ ಆರೋಗ್ಯ ಮಾಹಿತಿ, ಔಷಧ ಪೂರೈಕೆ, ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಅರ್ಹ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಪೂರೈಕೆ ಇತ್ಯಾದಿ ಸೇವಾ ಕಾರ್ಯ ಮಾಡಲಾಗುತ್ತಿದ್ದು, ಈಗಾಗಲೇ ಅನೇಕ ಮಂದಿ ಅಸಹಾಯಕರ ನೋವಿಗೆ ಸ್ಪಂದಿಸುವ ಮೂಲಕ ಅವರ ಮೊಗದಲ್ಲಿ ಭರವಸೆಯ ನಗು ಮೂಡಿಸಿದ ಸಂತೃಪ್ತಿ ಈ ಸಂಸ್ಥೆಯದ್ದು.


ನಮ್ಮ ಸೇವಾ ಯೋಜನೆಯಲ್ಲಿ ನೀವೂ ಕೈಜೋಡಿಸಬಹುದು.


For more details : http://www.gurubeladingalu.org

Contact : 9901246123

To contribute -

NAME : GURU BELADINGALU
BANK : CANARA BANK
ACCOUNT NO : 110000894880
IFSC CODE : CNRB0010241
BRANCH : LALBAGH TOWER, BALLALBAGH

UPI :  301617062894880@cnrb

ಗುರುಬೆಳದಿಂಗಳು ಕೋವಿಡ್ ಸಹಾಯವಾಣಿ

About Gurubeladingalu

ಗುರುಬೆಳದಿಂಗಳು ಕೋವಿಡ್ ಸಹಾಯವಾಣಿ ಮೂಲಕ ಕಳೆದ ಒಂದು ವಾರದಲ್ಲಿ ನಡೆದ ಸೇವಾ ಕಾರ್ಯದ ವರದಿ

2021 ಮೇ 10 ರಿಂದ ಮೇ 16 ವರೆಗೆ
===≠===========

ಒಟ್ಟು ಮನವಿ : 58
ಪೂರ್ಣಗೊಂಡ ಮನವಿ : 42
ಪ್ರಕ್ರಿಯೆಯಲ್ಲಿರುವ ಮನವಿ : 16
ಒಟ್ಟು ನಿಧಿ : ₹ 1,01,088/-
=================

ಆಹಾರ ಹಾಗೂ ಔಷಧಿ ಕಿಟ್ : 34
ಅಹಾರ ಹಾಗೂ ಔಷಧಿ ಕಿಟ್ ನಿಧಿ : ₹ 62,628/-
================

ತುರ್ತು ಪರಿಹಾರ : 8
ತುರ್ತು ಪರಿಹಾರ ನಿಧಿ : ₹ 38,500/-
=================

ವೈದ್ಯಕೀಯ ಸಹಾಯ : 7
=================

ನಿಮ್ಮ ಬೆಂಬಲ ನಮ್ಮ ಯಶಸ್ಸು

--ಟೀಮ್ ಗುರುಬೆಳದಿಂಗಳು

ಸಿಡಿಲಿಗೆ ನಗ ನಗದು ಕಳೆದುಕೊಂಡ ಬಡಕುಟುಂಬಕ್ಕೆ ಆಸರೆಯಾದ ಗುರುಬೆಳದಿಂಗಳು

About Gurubeladingalu

ಬಂಟ್ವಾಳ ತಾಲೂಕಿನ ಸಜಿಪಮುನ್ನೂರಿನ ಲಲಿತಾ ಸೋಮಪ್ಪ ಅವರು ವಾಸವಿದ್ದ ಬಾಡಿಗೆ ಮನೆಗೆ ಸಿಡಿಲು ಬಡಿದು ಸಂಪೂರ್ಣ ಜಖಂಗೊಂಡಿದ್ದು, ಸಂಬಂಧಿಕರ ಮದುವೆಗೆಂದು ಮನೆಯಲ್ಲಿ ಇಟ್ಟಿದ್ದ ಚಿನ್ನ, ನಗದು ಸಂಪೂರ್ಣ ಸುಟ್ಟು ಹೋಗಿದೆ. ಘಟನೆಯಿಂದ ಇಡೀ ಕುಟುಂಬ ಅಘಾತಗೊಳಗಾಗಿದೆ. ಈ ಕಾರಣದಿಂದ ತುರ್ತು ನೆರವು ನೀಡುವ ನಿಟ್ಟಿನಲ್ಲಿ ಗುರುಬೆಳದಿಂಗಳು ಸೇವಾ ಯೋಜನೆ ಕುದ್ರೋಳಿ ಇದರ ಪ್ರಥಮ ಸೇವಾ ಯೋಜನೆಯ ಮೊದಲ ಆಸರೆ ನೆರವು ಯೋಜನೆಯಿಂದ 50 ಸಾವಿರ ರೂಪಾಯಿ ಸಹಾಯಧನ ನೀಡಲಾಯಿತು. ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ಅಭಿವೃದ್ದಿ ಸಮಿತಿ ಅಧ್ಯಕ್ಷ ರಾದ ದೇವೇಂದ್ರ ಪೂಜಾರಿ, ದೇವಳ ಆಡಳಿತ ಸಮಿತಿ ಕೋಶಾಧಿಕಾರಿ ಪದ್ಮರಾಜ್ ಆರ್., ಉದ್ಯಮಿ ರವಿ, ಸತೀಶ್ ಗುರುಮಂದಿರ, ವಿವೇಕ್ ಕೋಟ್ಯಾನ್, ಯಶವಂತ್ ದೇರಾಜೆ, ರಾಜೇಶ್ ಸುವರ್ಣ, ಪ್ರವೀಣ್ ಅಂಚನ್ ಮೊದಲಾದವರಿದ್ದರು.

© COPYRIGHT 2025. GURUBELADINGALU