DONOR LOGIN

ABOUT US

ಆತ್ಮೀಯರೇ,

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶೀರ್ವಾದ ಹಾಗೂ ಬ್ರಹ್ಮಶ್ರೀ ನಾರಾಯಣಗುರುವರ್ಯರ ತತ್ತ್ವಾದರ್ಶಗಳ ಬೆಳಕಿನಲ್ಲಿ, ಜನಾರ್ದನ ಪೂಜಾರಿಯವರ ಮಾರ್ಗದರ್ಶನ ಹಾಗೂ ದಿ.ಜಯ ಸಿ.ಸುವರ್ಣರ ಆಶೋತ್ತರಗಳ ಸ್ಫೂರ್ತಿಯ ನೆಲೆಯಲ್ಲಿ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಹಾಗೂ ಯುವವಾಹಿನಿ ಸಂಸ್ಥೆಯ ಸಲಹೆಗಾರರಾದ ಪದ್ಮರಾಜ್ ಆರ್. ಇವರ ಮುಂದಾಳತ್ವದಲ್ಲಿ, ಯುವಕರ ಕ್ರಿಯಾಶೀಲ ತಂಡವು ಜಾತಿ- ಮತ- ಪಕ್ಷ ಭೇದ ರಹಿತವಾಗಿ ಸಮಾಜ ಸೇವೆಗೆ ಕಟಿಬದ್ಧರಾಗುವ ನಿಟ್ಟಿನಲ್ಲಿ, ಶಿಕ್ಷಣ, ಆರೋಗ್ಯ, ಆಸರೆ ಎಂಬ ಮೂರು ಮುಖ್ಯ ಧ್ಯೇಯಗಳೊಂದಿಗೆ ಗುರುಬೆಳದಿಂಗಳು ಯೋಜನೆಯನ್ನು ಅನುಷ್ಠಾನಗೊಳಿಸಿದೆ.

ವಿದ್ಯಾರ್ಥಿಗಳಿಗೆ ಸರಸ್ವತಿಯಾಗಿ ಬದುಕಿನ ನಡೆ ಜ್ಞಾನದ ಹಾದಿಯಾಗಲು ಸಹಾಯ ನೀಡುವ ಶೈಕ್ಷಣಿಕ ನಿಧಿ, ರೋಗಿಗಳಿಗೆ ಸಂಜೀವಿನಿಯಾಗಿ ಆರೋಗ್ಯ ನಿಧಿ, ನೊಂದವರಿಗೆ ಕರುಣಾಮಯಿಯಾಗಿ ಆಸರೆ ನಿಧಿಯನ್ನು ಅರ್ಹರಿಗೆ ತಲುಪಿಸುವ ಯೋಜನೆಯೇ ಗುರು ಬೆಳದಿಂಗಳು.

ಸಮಾಜದ ಸರ್ವರಿಂದ ಅರ್ಹರಿಗಾಗಿ...

ಎಲ್ಲ ವರ್ಗದ ಜನರಿಗೂ ಸೇವೆ ಮಾಡುವ ಅವಕಾಶ ಗುರುಬೆಳದಿಂಗಳು ಯೋಜನೆಯ ಮೂಲಕ ಸಿಗಬೇಕು ಎಂಬ ಉದ್ದೇಶದಿಂದ ವಾರ್ಷಿಕ ಸದಸ್ಯತ್ವದ ಮೊತ್ತವನ್ನು ಕನಿಷ್ಠ ₹1200/- ನಿಗದಿಪಡಿಸಲಾಗಿದೆ. ₹ 5 ಸಾವಿರ, ₹ 10 ಸಾವಿರ, ₹25 ಸಾವಿರ ಹಾಗೂ ₹ ಒಂದು ಲಕ್ಷಕ್ಕೂ ಅಧಿಕ ಸಹಾಯಹಸ್ತ ನೀಡಿ, ಈಗಾಗಲೇ ಗೌರವ ಸದಸ್ಯರು, ಪೋಷಕ ಸದಸ್ಯರು, ಮಹಾಪೋಷಕ ಸದಸ್ಯರಾಗಿ ಗುರುಬೆಳದಿಂಗಳು ಜತೆ ಕೈಜೋಡಿಸಿರುವುದು ನಮಗೆ ಇನ್ನಷ್ಟು ಸ್ಫೂರ್ತಿ ತುಂಬಿದೆ. ಹೀಗೆ ದಾನಿಗಳಿಂದ ಸಂಗ್ರಹಿಸಿ, ಒಟ್ಟುಗೂಡಿಸಿದ ನಿಧಿಯನ್ನು ಅರ್ಹರಿಗೆ ತಲುಪಿಸುವಲ್ಲಿ ಸಂಪರ್ಕ ಸೇತುವೆಯಾಗಿ ಗುರುಬೆಳದಿಂಗಳು ಕಾರ್ಯನಿರ್ವಹಿಸಲಿದೆ.

ಗುರುವಿನ ನುಡಿಯಂತೆ ನಮ್ಮ ನಡೆ

ನಾವು ಕೈಗೆತ್ತಿಕೊಂಡಿರುವ ಕಾರ್ಯಕ್ಕೆ ಎಲ್ಲೂ ಸೋಲಾಗಿಲ್ಲ, ಅಪಸ್ವರದ ಮಾತುಗಳು ಬಂದಿಲ್ಲ... ಕೇಳಿದಾಗ ಇಲ್ಲ ಎಂದವರಿಲ್ಲ ಎನ್ನುವುದು ನಮ್ಮ ಕೆಲಸಕ್ಕೆ ಮತ್ತಷ್ಟು ಸ್ಫೂರ್ತಿ ನೀಡಿದೆ. ಈ ನಿಟ್ಟಿನಲ್ಲಿ ಗುರು ಬೆಳದಿಂಗಳು ಯೊಜನೆಯು ಕನಿಷ್ಠ 25,000 ಸದಸ್ಯರ ನೆರವಿನ ಹಸ್ತದಿಂದ, ವಾರ್ಷಿಕ  ಒಂದು ಕೋಟಿ ರೂಪಾಯಿಗಳನ್ನು ಹಸ್ತಾಂತರಿಸುವ ಗುರಿಯನ್ನು ಗುರು ಬೆಳದಿಂಗಳು ಹೊಂದಿದೆ.

ದಾನ ನೀಡಿದವರ ಶ್ರಮ ವ್ಯರ್ಥವಾಗಕೂಡದು. ಹಾಗೆಯೇ ಇದನ್ನು ಪಡೆದವರೂ ಆತ್ಮವಂಚಕರಾಗಬಾರದು. ನಮ್ಮ ನಿಸ್ವಾರ್ಥ ಸೇವೆ ಅರ್ಹರಿಗೆ ತಲುಪಬೇಕು ಎನ್ನುವ ಕಾರಣಕ್ಕೆ ಗುರು ಬೆಳದಿಂಗಳು ಆಯ್ಕೆ ಸಮಿತಿಯು ಫಲಾನುಭವಿ ಆಕಾಂಕ್ಷಿಗಳ ಮನೆಗೆ ಭೇಟಿ ನೀಡಿ ಅವರ ಮನೆ ಪರಿಸ್ಥಿತಿ, ಆರ್ಥಿಕ ಸ್ಥಿತಿಗತಿ ಪರಿಶೀಲಿಸಿ, ಅರ್ಹರು ಎಂದು ತಿಳಿದರೆ ಮಾತ್ರ ಯೋಜನೆಯ ನಿಧಿ ಹಸ್ತಾಂತರ ಮಾಡಲಾಗುವುದು.

ಪಾರದರ್ಶಕತೆ... ತಂತ್ರಜ್ಞಾನದ ಮೂಲಕ...

ನಮ್ಮದೊಂದು ಕನಸು..... ಗುರುಬೆಳದಿಂಗಳು ಯೋಜನೆಯ ಪ್ರತಿಯೊಂದು ವಿವರಗಳನ್ನು ನಮ್ಮ ಬೆರಳಂಚಿನಲ್ಲಿ ನೋಡುವಂತಾಗಬೇಕು ಎಂದು ಇದಕ್ಕಾಗಿ www.gurubeladingalu.com ಎಂಬ ವೆಬ್ ಕೊಂಡಿ ರಚನೆಯಾಗಿದೆ.

ಯೋಜನೆಯ ಸದಸ್ಯರು, ಫಲಾನುಭವಿಗಳು, ಆರ್ಥಿಕ ಕ್ರೋಡೀಕರಣ, ನಿಧಿ ಹಸ್ತಾಂತರ ಹೀಗೆ ಈ ಎಲ್ಲಾ ವಿವರಗಳನ್ನು ವೆಬ್‌ಸೈಟ್ ನಲ್ಲಿ ಅಪ್‌ಲೋಡ್ ಮಾಡಿ, ಪ್ರತಿಯೊಂದು ಸದಸ್ಯರು ತಮ್ಮ ಮೊಬೈಲ್ ಮೂಲಕ ಸಮಗ್ರ ಮಾಹಿತಿ ಪಡೆಯುವಂತೆ ನೂತನ ತಂತ್ರಜ್ಞಾನ ರೂಪಿಸಲಾಗಿದೆ.

ಗುರು ಬೆಳದಿಂಗಳು ಇದು ಬದುಕು ಬೆಳಗಿಸುವ ಬೆಳಕು.
ಮಾನವೀಯತೆಯಿಂದ ಮಿಡಿಯುವ ನಿಸ್ವಾರ್ಥ ಸೇವೆಗೆ ಕೈಜೋಡಿಸುವ ಈ ಯೋಜನೆಗೆ ನಿಮ್ಮ ಸಹಕಾರ ಸದಾ ನಮ್ಮೊಂದಿಗಿರಲಿ ಎಂಬ ಆಶಯದೊಂದಿಗೆ,

ಅಧ್ಯಕ್ಷರು ಹಾಗೂ ಸದಸ್ಯರು
ಗುರು ಬೆಳದಿಂಗಳು (ರಿ)

In light of the blessings of Kudroli Sri Gokarnanatha Kshethra , with the principles and ideals of Brahmashree Narayanaguru, guidance of Janardhana Poojary, inspired by the dreams of late Jaya C Suvarna , under the leadership of the treasurer of Kudroli Sri Gokarnanatha Kshethra and the advisor of Yuvavahini Association Padmaraj , a group of active youth have initiated a scheme under the name Guru Beladingalu with an aim to render social service devoid of any caste- religion party inequalities with three important goals i.e Education, health and support. Guru Beladingalu aims at providing for the eligible, Education fund to help lead the students in the path of knowledge as goddess Saraswathi, Health fund to be life saver for patients and Support fund for the downtrodden.

From everyone in the society to the eligible


With an objective that people for all strata of the society should get an opportunity to render services Guru Beladingalu scheme has fixed the annual membership fee to a minimum of Rs.1200/-. By extending financial assistance of Rs.5 thousand, Rs.10 thousand, Rs. 25 thousand and even more than One lakh Rupees, already by now by becoming members of the Guru Belandingalu scheme our Honorary Members, Parent Members and founder members have joined hands with us and instilled more inspiration among us. Guru Beladingalu is going to function as a connecting bridge in respect of the amount collected from the donors in delivering it to eligible candidates.

We walk as per Guru's talk


We have never faced any failure in any work undertaken by us, nor faced any redicule.. no one had denied our request, this has given more inspiration for our work. In this regard, with the financial help of minimum 25,000 members, Guru Beladingalu aims at handing over charity of Rs.one crore annually. The efforts of the donors should not go in vain, likewise those who received the charity should also not cheat their conscience. With an intent that our selfless service reaches the really eligible candidates, the members of the selection committee visits the house of the applicants seeking charity, make enquires about their house condition, financial condition and only after ascertaining that they are really eligible the aid from the scheme will be handed over.

Transparency through Technology


It our dream…. That every information about guru Beladingalu scheme should be available to its members on their finger tips and in that regarda website www.gurubelaningalu.com has been formed. A new technology has been adopted so that members of the Scheme, beneficiaries, fund mobilization, handing over of aid all these details can be uploaded from the website and every member can get complete information will be available to all the members on their mobile phones.

'Guru Beladingalu' this is light brightening life


We extend our wishes that your patronage will continue with this scheme which is formed with humanitarian sentiments and selfless service forever.

President and Members
Guru Beladingalu ®

© COPYRIGHT 2025. GURUBELADINGALU