DONOR LOGIN
Gurubeladingalu

About Gurubeladingalu

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶೀರ್ವಾದ ಹಾಗೂ ಬ್ರಹ್ಮಶ್ರೀ ನಾರಾಯಣಗುರುವರ್ಯರ ತತ್ತ್ವಾದರ್ಶಗಳ ಬೆಳಕಿನಲ್ಲಿ, ಜನಾರ್ದನ ಪೂಜಾರಿಯವರ ಮಾರ್ಗದರ್ಶನ ಹಾಗೂ ದಿ.ಜಯ ಸಿ.ಸುವರ್ಣರ ಆಶೋತ್ತರಗಳ ಸ್ಫೂರ್ತಿಯ ನೆಲೆಯಲ್ಲಿ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಹಾಗೂ ಯುವವಾಹಿನಿ ಸಂಸ್ಥೆಯ ಸಲಹೆಗಾರರಾದ ಪದ್ಮರಾಜ್ ಆರ್. ಇವರ ಮುಂದಾಳತ್ವದಲ್ಲಿ, ಯುವಕರ ಕ್ರಿಯಾಶೀಲ ತಂಡವು ಜಾತಿ- ಮತ- ಪಕ್ಷ ಭೇದ ರಹಿತವಾಗಿ ಸಮಾಜ ಸೇವೆಗೆ ಕಟಿಬದ್ಧರಾಗುವ ನಿಟ್ಟಿನಲ್ಲಿ, ಶಿಕ್ಷಣ, ಆರೋಗ್ಯ, ಆಸರೆ ಎಂಬ ಮೂರು ಮುಖ್ಯ ಧ್ಯೇಯಗಳೊಂದಿಗೆ ಗುರುಬೆಳದಿಂಗಳು ಯೋಜನೆಯನ್ನು ಅನುಷ್ಠಾನಗೊಳಿಸಿದೆ.

In light of the blessings of Kudroli Sri Gokarnanatha Kshethra , with the principles and ideals of Brahmashree Narayanaguru, guidance of Janardhana Poojary, inspired by the dreams of late Jaya C Suvarna , under the leadership of the treasurer of Kudroli Sri Gokarnanatha Kshethra and the advisor of Yuvavahini Association Padmaraj , a group of active youth have initiated a scheme under the name Guru Beladingalu with an aim to render social service devoid of any caste- religion party inequalities with three important goals i.e Education, health and support. Guru Beladingalu aims at providing for the eligible, Education fund to help lead the students in the path of knowledge as goddess Saraswathi, Health fund to be life saver for patients and Support fund for the downtrodden.

About Gurubeladingalu

News and Updates

About Gurubeladingalu

ಭರವಸೆಯ ಬೆಳಕು ಗುರು ಬೆಳದಿಂಗಳು : ದಯಾನಂದ ಕರ್ಕೇರ ಉಗ್ಗೆಲ್‌ಬೆಟ್ಟು.

ಮನುಷ್ಯ ಜನ್ಮ ಶ್ರೇಷ್ಠವಾದುದು.ಆತ್ಮ-ಪರಮಾತ್ಮನನ್ನು ಒಲಿಸಿಕೊಳ್ಳುವ ಸಾಮರ್ಥ್ಯ ನಮ್ಮ ಜೀವರಾಶಿಗಿದೆ. ಇದನ್ನು ಸಾಧ್ಯವಾಗಿಸುವ ಪ್ರಕಾರಗಳಲ್ಲಿ ಮನುಷ್ಯತ್ವ ಪ್ರಮುಖವಾದುದು.ಮೊದಲು ನಮ್ಮಲ್ಲಿ ಒಳ್ಳೆಯತನ ಇರಬೇಕು, ಮತ್ತು ಅಂತಹದ್ದನ್ನೆ ಬಯಸಬೇಕು ಹಾಗೂ ಸಾಧ್ಯವಾಗಿಸಬೇಕು.ಸಾಮಾಜಿಕ ಸುಧಾರಣೆಯ ಸದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಸಾರ್ವಕಾಲಿಕ ಸತ್ಯ ಸಂದೇಶದ ಪ್ರೇರಣೆಯೊಂದಿಗೆ, ವಿಶ್ವಪ್ರಸಿದ್ದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅನುಗ್ರಹದಿಂದ ಗುರುಬೆಳದಿಂಗಳು ಎನ್ನುವ ಸಮಾಜಮುಖಿ ಸಾಂಘಿಕ ಶಕ್ತಿಯು ಶಿಕ್ಷಣ, ಆರೋಗ್ಯ, ಆಸರೆ,ಈ ಮೂರು ಮುಖ್ಯ ತತ್ವದಡಿ ಅನುಷ್ಠಾನಗೊಂಡಿದೆ.ಮಾನವತೆಯನ್ನು ಪ್ರಕಾಶಿಸುವ ಪರ್ಯಟನೆಗೆ ಸದ್ದಿಲ್ಲದೆ ಹೊರಟಿರುವುದು ಸಂತಸದ ಸಂಗತಿ.


read more
© COPYRIGHT 2025. GURUBELADINGALU